ಈವೆಂಟ್

ಈವೆಂಟ್

ಕೊರೋನ ಹರಡದಂತೆ ತಡೆಯಲು ಸ್ವಯಂ ಜಾಗೃತಿ

ಕೊರೋನ ಹರಡದಂತೆ ತಡೆಯಲು ಸ್ವಯಂ ಜಾಗೃತಿ ಹೊರತಾಗಿ ಅನ್ಯ ಮಾರ್ಗವಿಲ್ಲ : ಪಿ.ರಮೇಶ್ ಆದರ್ಶ ಸಮಾಜ ಕಾರ್ಯ ಸಂಸ್ಥೆ ಮತ್ತು ಸಮೂಹ ಶಕ್ತಿ ಬಳಗದ ಸಹಯೋಗದಲ್ಲಿ ಗ್ರಾಮಸ್ಥರಿಗೆ ಉಚಿತ ಮಾಸ್ಕ್, ಸ್ಯಾನಿಟೈಸರ್ ವಿತರಣೆ : ಹೊಳಲ್ಕೆರೆ : ವಿಶ್ವವನ್ನು ಕಾಡುತ್ತಿರುವ ಕೊರೋನ ಮಹಾಮಾರಿ ಹರಡದಂತೆ ತಡೆಯಲು ಸ್ವಯಂ ಜಾಗೃತಿಯ ಹೊರತಾಗಿ ಅನ್ಯ ಮಾರ್ಗವಿಲ್ಲ ಈ ನಿಟ್ಟಿನಲ್ಲಿ ಜನರಲ್ಲಿ ಮಾಸ್ಕ್ ಧಾರಣೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕುರಿತು ಸ್ವಯಂ ಜಾಗೃತಿ ಮೂಡಬೇಕು ಎಂದು ಮಾಜಿ ಶಾಸಕ ಪಿ.ರಮೇಶ್ ಅಭಿಪ್ರಾಯಪಟ್ಟರು.
View Details

ಸಮೂಹಶಕ್ತಿ ಬಳಗ ಶಿವಪುರ

ಸಮೂಹಶಕ್ತಿ ಬಳಗ ಶಿವಪುರ ವತಿಯಿಂದ 75 ನೇ ಸ್ವಾತಂತ್ರೋತ್ಸವವನ್ನು ಎನ್ ಬಿ ನಾಗರಾಜ್ ತಾಲ್ಲೂಕು ಸಂಘಟನಾ ಕಾರ್ಯದರ್ಶಿ ಹಾಗೂ ಎಂ ಶಿವಕುಮಾರ್ ಗ್ರಾಮ ಘಟಕದ ಅಧ್ಯಕ್ಷರು ಇವರ ಸಮ್ಮುಖದಲ್ಲಿ ಹಮ್ಮಿಕೊಳ್ಳಲಾಗಿತ್ತು ದೊಡ್ಡಗೌಡರ ಶಂಕ್ರಪ್ಪನವರು ಹಿರಿಯ ಭಜನಾ ಕಲಾವಿದರು ಇವರು ಧ್ವಜಾರೋಹಣ ನೆರವೇರಿಸಿದರು ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಜಿ ಎಸ್ ವೇದಮೂರ್ತಿ ನಿವೃತ್ತ ಶಿಕ್ಷಕರು ಸಿ ಆರ್ ಸಂಗಮೇಶ್ವರ v s s n ಕಾರ್ಯದರ್ಶಿ ಹಾಗೂ ಸಂಘದ ಸದಸ್ಯರಾದ ಜಿ ಕೆ ಮಲ್ಲಿಕಾರ್ಜುನ ಶ್ರೀ ಮತಿ ರುದ್ರಮ್ಮ ಎಂ ಜೆ ನಾಗರಾಜ್ ಎಸ್ ಕೆ ಬಸವರಾಜಪ್ಪ ಎಚ್ ಎನ್ ಗಂಗಪ್ಪ ಎಚ್ ಬಿ ಮಹೇಂದ್ರ ಶಿವಪುರ ಗ್ರಾಮಸ್ಥರು ಹಾಗೂ ಸಂಘದ ಸದಸ್ಯರು ಭಾಗವಹಿಸಿದ್ದರು ಈ ಸಂದರ್ಭ ದಲ್ಲಿ ಭಜನಾ ಕಲಾವಿದರಾದ ದೊಡ್ಡಗೌಡರ ಶಂಕ್ರಪ್ಪನವರ ರನ್ನುಸಂಘದ ವತಿಯಿಂದ ಸನ್ಮಾನಿಸಲಾಯಿತು.
View Details

ರಾಜ್ಯಮಟ್ಟದ ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾಟ

ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹನುಮನಹಳ್ಳಿಯಲ್ಲಿ ನಡೆದ ರಾಜ್ಯ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯದಲ್ಲಿ ದಾವಣಗೆರೆ ಸಮೂಹ ಶಕ್ತಿ ತಂಡವು ಫೈನಲ್ ತಲುಪಿ ಚಾಂಪಿಯನ್ ಪಟ್ಟ ಪಡೆದುಕೊಂಡಿದೆ. ತೀವ್ರ ಕುತೂಹಲ ಮೂಡಿಸಿದ್ದ ಅಂತಿಮ ಸುತ್ತಿನ ಪಂದ್ಯದಲ್ಲಿ ದಾವಣಗೆರೆ ಸಮೂಹ ಶಕ್ತಿ ತಂಡದ ಆಟಗಾರರು ಬಸಾಪುರ ಹನುಮನಹಳ್ಳಿ ತಂಡದ ವಿರುದ್ಧ ಗೆದ್ದು 25 ಸಾವಿರ ನಗದು ಹಾಗು ಟ್ರೋಫಿಯನ್ನು ಪಡೆದರು. ಎರಡನೇ ಸ್ಥಾನವನ್ನು ಸ್ಥಳೀಯ ಹನುಮನಹಳ್ಳಿ ತಂಡದ ಆಟಗಾರರು 15ಸಾವಿರ ನಗದು ಹಾಗು ಟ್ರೋಫೀಯನ್ನು ಗಳಿಸಿದರು. ದಾವಣಗೆರೆ ತಂಡದ ಅಂಜು ನಾಯ್ಕ್ ತಂಡಕ್ಕೆ ಉತ್ತಮ ಅಂಕಗಳನ್ನು ತಂದುಕೊಡುವುದರ ಮೂಲಕ ಗೆಲುವಿಗೆ ಕಾರಣವಾದರು. ಆಟದಲ್ಲಿ ಮೂರನೇ ಸ್ಥಾನವನ್ನು ಕಡ್ಲಬಾಳ ತಂಡ ಪಡೆದು 10 ಸಾವಿರ ರೂಪಾಯಿ ನಗದನ್ನು ಪಡೆದುಕೊಂಡಿದೆ. ಮತ್ತು ನಾಲ್ಕನೇ ಸ್ಥಾನವನ್ನು ಟಿಬಿ ಡ್ಯಾಮ್ ತಂಡ ಪಡೆದುಕೊಂಡಿದೆ. ಹನುಮನಹಳ್ಳಿ ತಂಡದ ಆಟಗಾರರಾದ ದೇವರಾಜ್ ಹಾಗು ರವಿಕುಮಾರ್ ಉತ್ತಮ ಹಿಡಿತಗಾರ ಪ್ರಶಸ್ತಿ ಪಡೆದರು. ಈ ರೋಚಕ ಪಂದ್ಯಾವಳಿಯಲ್ಲಿ ರಾಜ್ಯದ ವಿವಿಧೆಡೆಯಿಂದ ಒಟ್ಟು 15 ತಂಡಗಳು ಭಾಗವಹಿಸಿದ್ದವು. ಸ್ಮೇಯೋರ್ ಕಂಪೆನಿಯ ಆದಿತ್ಯ ಅವರು ನಾಲಕ್ಕೂ ತಂಡಗಳಿಗೆ ನಗದು ಬಹುಮಾನದೊಂದಿಗೆ ಟ್ರೋಫಿಯನ್ನು ವಿತರಿಸಿದರು. ಈ ಸಂದರ್ಭದಲ್ಲಿ ಅಪ್ಪು ಅಭಿಮಾನಿ ಬಳಗದ ಸದಸ್ಯರು ಉಪಸ್ಥಿತರಿದ್ದರು.
View Details