ಅಭಿಯಾನ

ಅಭಿಯಾನ

    ಸಮೂಹಶಕ್ತಿ, ಬೆಂಗಳೂರಿನ ಅನೇಕ ಕಾರ್ಪೊರೇಷನ್ ವಾರ್ಡ್ ಗಳಲ್ಲಿ ಮತ್ತು ಚಿತ್ರದುರ್ಗ ಮತ್ತು ಶಿವಮೊಗ್ಗ ಜಿಲ್ಲೆಗಳ ಅನೇಕ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರ ಜಾಗೃತಿ ಅಭಿಯಾನವನ್ನು ಆರಂಭಿಸಲಿದೆ ಮತ್ತು ಅದರೊಂದಿಗೆ ಜವಾಬ್ದಾರಿಯುತ ಮತಚಲಾವಣೆಯ ಬಗ್ಗೆಯೂ ಮತದಾರರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಕಾರ್ಯಕ್ರಮದ ಮೂಲಕ ಚುನಾವಣೆಯಲ್ಲಿ ಸ್ಪರ್ಧಿಗಳು ಗೆದ್ದರೆ ಯಾವ ರೀತಿ ವರ್ತಿಸಬೇಕು ಅವರಿಂದ ಏನನ್ನು ನಿರೀಕ್ಷಿಸಬಹುದು ಮತ್ತು ಅವರು ಏನೆಲ್ಲಾ ಮಾಡಲು ಸಮರ್ಥರು ಎಂದು ಮತದಾರರು ತಿಳಿದುಕೊಳ್ಳಬಹುದಾಗಿದೆ.


    ಈ ಮತಶಕ್ತಿ ಕಾರ್ಯಕ್ರಮ ಇದೇ ವರ್ಷ ಅಕ್ಟೊಬರ್ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ಆರಂಭವಾಗಿ ಆನಂತರ ಏಕಕಾಲದಲ್ಲಿ ವಿಧಾನಸಭಾ ಕ್ಷೇತ್ರಗಳಲ್ಲೂ ನಡೆಯಲಿದೆ. ಇದು ಒಂದು ಮಹತ್ವಾಕಾಂಕ್ಷೆಯ ಅಭಿಯಾನವಾಗಿದ್ದು ಸಮೂಹಶಕ್ತಿಗೆ ಬಹಳ ದೊಡ್ಡ ರೀತಿಯಲ್ಲಿ ಸಾರ್ವಜನಿಕ ಬೆಂಬಲವನ್ನು ತಂದು ಕೊಡುವಲ್ಲಿ ಯಶಸ್ವಿಯಾಗುತ್ತದೆ ಎನ್ನುವ ವಿಶ್ವಾಸ ಸಮೂಹ ಶಕ್ತಿಯ ಕಾರ್ಯಕರ್ತರದ್ದಾಗಿದೆ.

    ಈ ಅಭಿಯಾನದಲ್ಲಿ ಪಾಲ್ಗೊಳ್ಳುವ ಇಚ್ಛೆ ನಿಮ್ಮದಾಗಿದ್ದಲ್ಲಿ ತಕ್ಷಣ ನಮ್ಮನ್ನು ಸಂಪರ್ಕಿಸಿ - 6362470182