ಉದ್ದೇಶಗಳು

ಉದ್ದೇಶಗಳು

* ತಳಮಟ್ಟದಲ್ಲಿ ನಾಯಕತ್ವ
* ಶ್ರಮದಿಂದ ಗುರಿ ಸಾಧನೆ

* ಹಣದ ಬೆಂಬಲ‌ದ ಹಂಗಿಲ್ಲದೆ ಯಶಸ್ಸು
* ಮನೆಯ ಒಳಗೂ ಹೊರಗೂ ಸ್ವಚ್ಛತೆ

* ಸಮುದಾಯದ ಹಿತರಕ್ಷಣೆ,
* ಸಾತ್ವಿಕ ಹೋರಾಟ

* ಸಂಘಟನೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಿಕೆ
* ವ್ಯವಸ್ಥೆಯ ಮೇಲೆ‌ ಕಣ್ಗಾವಲು


* ಸರ್ಕಾರದ ಕೆಲಸಗಳ ಮೌಲ್ಯಮಾಪನ
* ಜನಬಲ ಕ್ರೋಢೀಕರಣ

* ಶಿಕ್ಷಣ ಪಡೆಯುವುದು
* ಜ್ಞಾನಾರ್ಜನೆ

* ಸಂಶೋಧನೆ
* ಸಾಮೂಹಿಕ ಜನಾಂದೋಲನಗಳುು

* ಅವಿರತ ಪ್ರಯತ್ನ
* ಸದಸ್ಯರ ಮಧ್ಯೆ ಪರಸ್ಪರ ಸಹಕಾರ, ಬೆಂಬಲ

ಸಮೂಹ ಶಕ್ತಿಯಿಂದ ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿ: ದೀಪಕ್ ತಿಮ್ಮಯ

ಚಿತ್ರದುರ್ಗ: ಮೆದುಳನ್ನು ಬಳಸಿದಷ್ಟೂ ಅದು ಹೆಚ್ಚು ಕ್ರಿಯಾಶೀಲವಾಗುತ್ತದೆ ಎಂದು ರಾಜಕೀಯ ವಿಶ್ಲೇಷಕ, ಹಿರಿಯ ಪತ್ರಕರ್ತ, 'ಸಮೂಹ ಶಕ್ತಿ'ಯ ಸಂಸ್ಥಾಪಕ ದೀಪಕ್ ತಿಮ್ಮಯ ಅಭಿಪ್ರಾಯಪಟ್ಟರು. ನಿಮ್ಮ ಮೆದುಳಿಗೆ ಕೆಲಸ ಕೊಟ್ಟು ಮೆದುಳನ್ನು ಇನ್ನಷ್ಟು‌ ಕ್ರಿಯಾಶೀಲಗೊಳಿಸಿ ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿಗೆ‌ ನೆರವಾಗುವ ಕಾರ್ಯವನ್ನು ಸಮೂಹ ಶಕ್ತಿ ಸಂಘಟನೆ ಮಾಡುತ್ತಿದೆ ಎಂದು ದೀಪಕ್ ತಿಮ್ಮಯ ಹೇಳಿದರು.


ಚಿತ್ರದುರ್ಗದ ನಿಜಲಿಂಗಪ್ಪ ಸ್ಮಾರಕ ಭವನದಲ್ಲಿ ಭಾನುವಾರ ಸಮೂಹ ಶಕ್ತಿ ಆಯೋಜಿಸಿದ್ದ ಉಪನ್ಯಾಸ‌ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಪಂಚದಲ್ಲಿ ಯಾವುದೇ ವ್ಯಕ್ತಿಗೆ ಶಕ್ತಿ ಕೊಡುವ ಕೆಲಸ ಮಾತಿನಿಂದ ಸಾಧ್ಯ. ಹೀಗಾಗಿ ಧನಾತ್ಮಕವಾಗಿ ಮಾತನಾಡುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡಬೇಕು ಎಂದರು.


ಅಧ್ಯಕ್ಷತೆ ವಹಿಸಿ ಮಾತನಾಡಿದ ಟಿವಿ ಹೌಸ್ ಸಂಸ್ಥೆಯ ಸಿಇಒ ವಿನಾಯಕ ರಾಮಕೃಷ್ಣ ಮಾತನಾಡಿ, ಇಂದಿನ ಸಮಾಜದಲ್ಲಿ ನಾಗರಿಕ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದು ಮಹತ್ತರ ಕಾರ್ಯವಾಗಿದೆ. ಎಲ್ಲರೂ ಸೇರಿದರೆ‌ ಸಮಾಜ‌ ಬದಲಾವಣೆ ಸಾಧ್ಯ ಎಂದರು.


ಉತ್ತಮ ಸಂವಹನದ ಮೂಲಕ ಸಾಮಾಜಿಕ ಸಮಸ್ಯೆಗಳನ್ನು ಇತ್ಯರ್ಥಪಡಿಸುವುದು ಇಂಗ್ಲೀಷ್‌ನಲ್ಲಿ ಒಂದು ಮಾತಿದೆ, “ಅಳುವ ಮಗುವಿಗೆ ಮಾತ್ರ ಹಾಲು ಸಿಗುತ್ತದೆ.” ಅದರ ಅರ್ಥವೇನೆಂದರೆ ಕೇಳದಿದ್ದರೆ ಏನೂ ಸಿಗುವುದಿಲ್ಲ ಎಂದು. ನಮ್ಮ ವ್ಯವಸ್ಥೆಗಳಲ್ಲೂ ಹಾಗೆಯೇ, ಅದರಲ್ಲೂ ಪ್ರಮುಖವಾಗಿ ಭಾರತದಂತಹ ದೊಡ್ಡ ಜನನಿಭಿಡ ರಾಷ್ಟçದಲ್ಲಿ ಅಷ್ಟು ಸುಲಭವಾಗಿ ನಮ್ಮ ದ್ವನಿ ಬೇರೆಯವರಿಗೆ ಕೇಳುತ್ತದೆ ಎಂದು ಯಾರಾದರೂ ಅಂದುಕೊAಡರೂ ಅದು ತಪ್ಪಾಗುತ್ತದೆ. ಏಕೆಂದರೇ ಎಲ್ಲರೂ ಏನೇನೋ ಹೇಳುತ್ತಿರುತ್ತಾರೆ ಆದರೆ ಕೇಳುವ ಕಿವಿಗಳು ಬಹಳ ಕಡಿಮೆ ಇರುತ್ತದೆ. ಅಂತಹಾ ಸಂದರ್ಭದಲ್ಲಿ ನಾವಾಡುವ ಮಾತು ಕೇಳುವ ಹಾಗಿರಬೇಕು, ಬೇರೆಯವರು ಅದನ್ನು ಆಲಿಸಬೇಕು, ಅದಕ್ಕೆ ಸ್ಪಂದಿಸಬೇಕು. ಅವರು ಸ್ಪಂದಿಸಬೇಕೆAದರೆ ನಾವು ಆಗ್ರಹಪೂರ್ವಕವಾಗಿ, ನಿರ್ದಿಷ್ಟವಾಗಿ, ವಸ್ತುನಿಷ್ಠವಾಗಿ ಹಾಗು ಕಾನೂನುಬದ್ದವಾಗಿ ಮಾತನಾಡಬೇಕು. ಇಷ್ಟೆಲ್ಲಾ ಹೇಗೆ ಮಾತನಾಡಲು ಸಾಧ್ಯವಾಗುತ್ತದೆ ಎಂದರೆ ಅದಕ್ಕೆ ಬೇಕಾಗುವ ನಿಟ್ಟಿನಲ್ಲಿ ನಾವು ಪ್ರಯತ್ನ ಮಾಡಬೇಕು. ಅದಕ್ಕಾಗಿ ಒಂದಷ್ಟು ತರಬೇತಿ, ಮಾರ್ಗದರ್ಶನವನ್ನು ಪಡೆದುಕೊಳ್ಳಬೇಕು ಹಾಗೆಯೇ ಬಹಳಷ್ಟು ತಯಾರಿಯನ್ನು ಮಾಡಿಕೊಳ್ಳಬೇಕು ಉದಾಹರಣೆಗೆ, ನಾವು ಒಂದು ಪತ್ರವನ್ನು ಬರೆಯಬೇಕೆಂದರೂ ಕೂಡ ಬರೆದೂ ಬರೆದು ರೂಢಿ ಮಾಡಿಕೊಳ್ಳಬೇಕು. ಪತ್ರದಲ್ಲಿ, ಬರೆಯುವಾಗ ಆಗುವಂತಹಾ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕು. ಏನೇನು ತಪ್ಪುಗಳು ಆಗಬಹುದು ಮತ್ತು ಆಗಿದೆ ಎನ್ನುವುದನ್ನು ಗುರುತಿಸಬೇಕು ಹಾಗು ಮುಂದೆ ಆ ರೀತಿಯಲ್ಲಿ ತಪ್ಪಾಗದಂತೆ ನೋಡಿಕೊಳ್ಳಬೇಕು, ಅಕಸ್ಮಾತ್ ತಪ್ಪಾದರೆ ಸರಿಪಡಿಸಿ ಕೊಳ್ಳಬೇಕು ಮತ್ತು ತಿದ್ದಿ ಪುನಃ ಕಳುಹಿಸಬೇಕು. ಹಾಗೆಯೇ ಮಾತನಾಡುವಾಗ ಕೂಡ ಹೇಗೆ ಮಾತನಾಡ ಬೇಕು, ಅತ್ಯಂತ ಕಡಿಮೆ ಅವಧಿಯಲ್ಲಿ ಹೆಚ್ಚು ವಿಷಯಗಳನ್ನು ಹೇಗೆ ಹೇಳಬೇಕು, ಹಿರಿಯರ ಜೊತೆ ಹೇಗೆ ಮಾತನಾಡಬೇಕು, ಅಧಿಕಾರಸ್ಥರಿಗೆ ಹೇಗೆ ಹೇಳಬೇಕು, ಸಮಾನವಯಸ್ಕರ ಜೊತೆ ಹೇಗೆ ಮಾತನಾಡಬೇಕು, ನಮಗಿಂತ ಕಿರಿಯರ ಜೊತೆ ಅಥವ ಕಿರಿಯ ಸ್ಥಾನದಲ್ಲಿರುವವರ ಜೊತೆ ಹೇಗೆ ಮಾತನಾಡಬೇಕು ಅನ್ನುವುದರ ಬಗ್ಗೆ ತಿಳುವಳಿಕೆ ಇರಬೇಕು. ಆಗ ನಮ್ಮ ಮಾತಿಗೆ ಬೆಲೆ ಬರುತ್ತದೆ. ಮಾತಿನ ಮತ್ತು ಬರವಣಿಗೆಯ ಈ ಎಲ್ಲಾ ಕೌಶಲ್ಯಗಳು ಸೇರಿ ಸಂವಹನ ಆದರೆ, ಆ ಸಂವಹನಾ ಕೌಶಲ್ಯವನ್ನು ಬೆಳೆಸಿಕೊಂಡರೇ ಆ ಕೌಶಲ್ಯದಿಂದ ಕೆಲಸವನ್ನು ಸೂಕ್ತವಾಗಿ, ಸರಿಯಾದ ಮಾರ್ಗದಲ್ಲಿ ಹಾಗು ವೇಗವಾಗಿ ಮಾಡುವುದಕ್ಕೆ ಸಾಧ್ಯವಾಗುತ್ತದೆ.


ಸಬಲರಾಗಿರುವುದು, ಜವಾಬ್ದಾರಿಯುತ ನಾಗರೀಕನಾಗಿರುವುದು

ಕಾರ್ಯಕರ್ತರಲ್ಲಿ ಪ್ರಾಮಾಣಿಕತೆ ವಿಚಾರದೃಷ್ಟಿ ಶಿಸ್ತು ಬೆಳೆಸುವುದು

ಸಮಾಜದ ನೆರೆಹೊರೆಯಲ್ಲಿನ ಬೆಳವಣಿಗೆಗಳ ಬಗ್ಗೆ ಅರಿವು ಮೂಡಿಸುವುದು

ಮಾನವ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದು, ನ್ಯಾಯ ಪರತೆ ಮೆರೆಯುವುದು

ಮೌಲ್ಯಗಳಲ್ಲಿ ನಂಬಿಕೆ ಇಟ್ಟು, ಸಮತೋಲನದ ಜಾತ್ಯಾತೀತ ನಿಲುವುಗಳನ್ನು ಅನುಸರಿಸುವುದು

ಅನ್ಯರನ್ನ ಗೌರವಿಸುವುದು

ಸಹಾನುಭೂತಿಯನ್ನು ಬೆಳೆಸಿಕೊಳ್ಳುವುದು

ನಮ್ಮ ವರ್ತನೆ

ಚಟುವಟಿಕೆಗಳಲ್ಲಿ ಧನಾತ್ಮಕ

ರಚನಾತ್ಮಕ

ಮತ್ತು ಪ್ರಾಯೋಗಿಕವಾಗಿರುವುದು