ಸಂಸ್ಥಾಪನೆ

ಸಂಸ್ಥಾಪನೆ

ಸಮೂಹಶಕ್ತಿ ಸಂಘಟನೆಯನ್ನು ಹಿರಿಯ ಪತ್ರಕರ್ತ, ಟಿವಿ ನಿರೂಪಕ, ಚಲನಚಿತ್ರ ನಿರ್ದೇಶಕ ಮತ್ತು ರಾಜಕೀಯ ವಿಶ್ಲೇಷಕರಾದ
ಶ್ರೀ ದೀಪಕ್ ತಿಮ್ಮಯ ಅವರ ಪ್ರೇರಣೆಯೊಂದಿಗೆ ೨೦೧೬ರಲ್ಲಿ ಸ್ಥಾಪಿಸಲಾಯಿತು. ಅವರು ಟಿವಿಯಲ್ಲಿ ನೀಡಿದ ಸಂದೇಶಕ್ಕೆ ಸ್ಪಂಧಿಸಿ ಮತ್ತು ಅವರ ಕರೆಗೆ ಓಗೊಟ್ಟು ಆಗಮಿಸಿದ್ದ ನೂರಾರು ಅಭಿಮಾನಿಗಳ ಸಮ್ಮುಖದಲ್ಲಿ ಸಮೂಹಶಕ್ತಿ ಸಂಘಟನೆಯನ್ನು ಸ್ಥಾಪಿಸಲಾಯಿತು.

Image

'ಸಮೂಹಶಕ್ತಿಗೆ ನಾನು ಬರಿ ಪ್ರೇರಣೆಯಾಗಿ, ಸ್ಪೂರ್ತಿಯಾಗಿ, ಮಾರ್ಗದರ್ಶಕನಾಗಿ ಹಾಗು ಕಾರ್ಯಕ್ರಮಗಳ ಮೇಲ್ವಿಚಾರಕನಾಗಿ ಮಾತ್ರ ಉಳಿಯುವೆ ಉಳಿದೆಲ್ಲ ಕಾರ್ಯಗಳನ್ನು ಸಂಘಟನೆಯ ಮುಖಂಡರು ಮತ್ತು ಸದಸ್ಯರೇ ನಿರ್ವಹಿಸಬೇಕು' ಎಂದು ಅವತ್ತು ಹೇಳಿದ ದೀಪಕ್ ತಿಮ್ಮಯ ಅವರು ಇಂದಿನವರೆಗೆ ಆ ರೀತಿಯೇ ನಡೆದು ಕೊಂಡು ಬಂದಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಸ್ಥಾಪಿತವಾದ ಸಂಘಟನೆಯಲ್ಲಿ ಈಗ ಅನೇಕ ನಾಯಕರು ರೂಪುಗೊಂಡಿದ್ದಾರೆ ಮಾತ್ರವಲ್ಲದೆ ಆ ನಾಯಕರ ಮೂಲಕ ನೂರಾರು ಮಂದಿ ಸಮೂಹಶಕ್ತಿಯ ಭಾಗವಾಗಿ ತಮ್ಮಲ್ಲಿ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳುವುದು ಮತ್ತು ಸಮಾಜಮುಖಿಯಾಗಿ ಕೆಲಸ ಮಾಡುವುದು ಸಾಧ್ಯವಾಗಿದೆ.


ಸಾಮಾನ್ಯ ಮನುಷ್ಯನೂ ಪ್ರೇರಣೆ ಸಿಕ್ಕಿದರೆ ಅಸಾಮಾನ್ಯ ವ್ಯಕ್ತಿಯಾಗುತ್ತಾನೆ, ಹಾಗೆ ಆತ ನಾಯಕನೂ ಆಗಬಹುದು ಎನ್ನುವುದು ಸಮೂಹಶಕ್ತಿಯ ಮುಖ್ಯ ಸಿದ್ಧಾಂತ. ಅದು ಇಂದಿನವರೆಗೆ ಸಂಘಟನೆಯಲ್ಲಿ ಸಾಬೀತಾಗುತ್ತಾ ಬಂದಿದೆ ಎನ್ನುವುದು ಹೆಮ್ಮೆಯ ಸಂಗತಿ.