ರಾಜ್ಯಮಟ್ಟದ ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾಟ
ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹನುಮನಹಳ್ಳಿಯಲ್ಲಿ ನಡೆದ ರಾಜ್ಯ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯದಲ್ಲಿ ದಾವಣಗೆರೆ ಸಮೂಹ ಶಕ್ತಿ ತಂಡವು ಫೈನಲ್ ತಲುಪಿ ಚಾಂಪಿಯನ್ ಪಟ್ಟ ಪಡೆದುಕೊಂಡಿದೆ. ತೀವ್ರ ಕುತೂಹಲ ಮೂಡಿಸಿದ್ದ ಅಂತಿಮ ಸುತ್ತಿನ ಪಂದ್ಯದಲ್ಲಿ ದಾವಣಗೆರೆ ಸಮೂಹ ಶಕ್ತಿ ತಂಡದ ಆಟಗಾರರು ಬಸಾಪುರ ಹನುಮನಹಳ್ಳಿ ತಂಡದ ವಿರುದ್ಧ ಗೆದ್ದು 25 ಸಾವಿರ ನಗದು ಹಾಗು ಟ್ರೋಫಿಯನ್ನು ಪಡೆದರು. ಎರಡನೇ ಸ್ಥಾನವನ್ನು ಸ್ಥಳೀಯ ಹನುಮನಹಳ್ಳಿ ತಂಡದ ಆಟಗಾರರು 15ಸಾವಿರ ನಗದು ಹಾಗು ಟ್ರೋಫೀಯನ್ನು ಗಳಿಸಿದರು. ದಾವಣಗೆರೆ ತಂಡದ ಅಂಜು ನಾಯ್ಕ್ ತಂಡಕ್ಕೆ ಉತ್ತಮ ಅಂಕಗಳನ್ನು ತಂದುಕೊಡುವುದರ ಮೂಲಕ ಗೆಲುವಿಗೆ ಕಾರಣವಾದರು. ಆಟದಲ್ಲಿ ಮೂರನೇ ಸ್ಥಾನವನ್ನು ಕಡ್ಲಬಾಳ ತಂಡ ಪಡೆದು 10 ಸಾವಿರ ರೂಪಾಯಿ ನಗದನ್ನು ಪಡೆದುಕೊಂಡಿದೆ. ಮತ್ತು ನಾಲ್ಕನೇ ಸ್ಥಾನವನ್ನು ಟಿಬಿ ಡ್ಯಾಮ್ ತಂಡ ಪಡೆದುಕೊಂಡಿದೆ. ಹನುಮನಹಳ್ಳಿ ತಂಡದ ಆಟಗಾರರಾದ ದೇವರಾಜ್ ಹಾಗು ರವಿಕುಮಾರ್ ಉತ್ತಮ ಹಿಡಿತಗಾರ ಪ್ರಶಸ್ತಿ ಪಡೆದರು. ಈ ರೋಚಕ ಪಂದ್ಯಾವಳಿಯಲ್ಲಿ ರಾಜ್ಯದ ವಿವಿಧೆಡೆಯಿಂದ ಒಟ್ಟು 15 ತಂಡಗಳು ಭಾಗವಹಿಸಿದ್ದವು. ಸ್ಮೇಯೋರ್ ಕಂಪೆನಿಯ ಆದಿತ್ಯ ಅವರು ನಾಲಕ್ಕೂ ತಂಡಗಳಿಗೆ ನಗದು ಬಹುಮಾನದೊಂದಿಗೆ ಟ್ರೋಫಿಯನ್ನು ವಿತರಿಸಿದರು. ಈ ಸಂದರ್ಭದಲ್ಲಿ ಅಪ್ಪು ಅಭಿಮಾನಿ ಬಳಗದ ಸದಸ್ಯರು ಉಪಸ್ಥಿತರಿದ್ದರು.