ಪ್ರಮಾಣ


ಒಬ್ಬ ಸಮೂಹಶಕ್ತಿಯ ಸದಸ್ಯ ಹೇಗಿರಬೇಕು ?

ಸಮೂಹ ಶಕ್ತಿಯ ಬಗ್ಗೆ ಬದ್ಧತೆ ಇರುವ ಒಬ್ಬ ಸದಸ್ಯ:

ಜ್ಞಾನಾರ್ಜನೆಯಲ್ಲಿ ಆಸಕ್ತಿ ಹೊಂದಿರಬೇಕು

ಪ್ರಚಲಿತ ವಿಚಾರಗಳನ್ನು ತಿಳಿದುಕೊಂಡಿರಬೇಕು

ಸಾಕಷ್ಟು ಕಾನೂನನ್ನೂ ಅರಿತಿರಬೇಕು

ರಾಷ್ಟ್ರ, ರಾಜ್ಯ ಮತ್ತು ಇತರ ರಾಜಕೀಯ ವ್ಯವಸ್ಥೆಗಳ ಅರಿವಿರಬೇಕು

ವೈಚಾರಿಕವಾಗಿ ಚಿಂತಿಸಬೇಕು

ವಾಸ್ತವವಾದಿಯಾಗಿರಬೇಕು

ಮೂಢನಂಬಿಕೆಗಳನ್ನು ವಿರೋಧಿಸಬೇಕು

ಕಂದಾಚಾರಗಳನ್ನು ಪ್ರತಿಭಟಿಸಬೇಕು

ನ್ಯಾಯಕ್ಕಾಗಿ ಹೋರಾಡಬೇಕು

ಧೈರ್ಯವಂತನಾಗಿರಬೇಕು

ಏಕಾಂಗಿಯಾಗಿ ಹೋರಾಡಲೂ ಸಿದ್ಧನಾಗಿರಬೇಕು

ಅನ್ಯಾಯವನ್ನು ಖಂಡಿಸಬೇಕು

ಅಕ್ರಮಗಳನ್ನು ತಡೆಯಬೇಕು

ಸಮಾಜ ಸೇವಕನಾಗಿರಬೇಕು

ತನ್ನ ಸಂಗಡಿಗರನ್ನೂ ಉತ್ತಮರನ್ನಾಗಿಸುವ ಮನಸ್ಥಿತಿಯವನಾಗಿರಬೇಕು

ಓದುವ ಹವ್ಯಾಸ ಹೊಂದಿರಬೇಕು

ತಪ್ಪಿಲ್ಲದೇ ಬರೆಯುವವನಾಗಿರಬೇಕು

ಪ್ರಶ್ನಿಸುವ ತಾಕತ್ತಿರುವವನಾಗಿರಬೇಕು

ವಿವೇಚನಾಶಕ್ತಿಯನ್ನು ಹೊಂದಿರಬೇಕು

ವಯಕ್ತಿವಾಗಿಯೂ ಬೆಳೆಯುವ ಹಂಬಲವಿರಬೇಕು

ಆರ್ಥಿಕವಾಗಿ ಸಧೃಢನಾಗುವ ಅಭಿಲಾಷೆ ಇರಬೇಕು

ಸಹಾಯ ಮಾಡುವ ಗುಣವಿರಬೇಕು

ಏನೇ ಕೆಲಸ ಮಾಡಲೂ ಸಿದ್ಧನಿರಬೇಕು

ಚತುರ ಮಾತುಗಾರ ನಾಗಿರಬೇಕು

ಸಂಘಟನಾ ಕೌಶಲ್ಯವಿರಬೇಕು

ತನ್ನ ತಪ್ಪನ್ನು ಒಪ್ಪಿಕೊಳ್ಳುವ ಉದಾರ ಹೃದಯಿಯಾಗಿರಬೇಕು

ಪ್ರಾಮಾಣಿಕನಾಗಿರಬೇಕು

ವಿರೋಧಿಯ ವಿಚಾರವನ್ನೂ ಗೌರವಿಸುವವನಾಗಿರಬೇಕು

ತನ್ನ ಕುಟುಂಬದ ಏಳಿಗೆಗಾಗಿ ದುಡಿಯುವವನಾಗಿರಬೇಕು

ಅವಿರತವಾಗಿ ಶ್ರಮಿಸುವವನಾಗಿರಬೇಕು

ಒಬ್ಬ ಉತ್ತಮ ನಾಗರಿಕನಾಗಿರಬೇನೆಂಬ ಹಂಬಲವಿರಬೇಕು

ಸತ್ಯದ ಬಗ್ಗೆ ಒಲವಿರುವವನಾಗಿರಬೇಕು

ಸಮಾಜದಲ್ಲಿ ದುರ್ಬಲರನ್ನು ಗೌರವಿಸಬೇಕು ಮತ್ತು ಅವರ ಪರವಾಗಿ ನಿಲ್ಲಬೇಕು

ದೇಶದ ಸಂವಿಧಾನವನ್ನು ತಿಳಿದಿರಬೇಕು ಮತ್ತು ಅದನ್ನು ಗೌರವಿಸಬೇಕು

ನೈತಿಕ ಮೌಲ್ಯಗಳನ್ನು ಮೈಗೂಡಿಸಿಕೊಂಡಿರಬೇಕು

ನಿಯತ್ತು ಮತ್ತು ಬದ್ಧತೆ ಇರಬೇಕು

ನಾಯಕನಾಗಿ ಬೆಳೆಯಬೇಕು

ತನ್ನಲ್ಲಿ ಮತ್ತು ತನ್ನ ಸುತ್ತಮುತ್ತಲೂ ಉತ್ತಮ ಬದಲಾವಣೆಯನ್ನು ತರಬೇಕು.

ಎಲ್ಲದರಲ್ಲೂ ಸದಾ ಶಿಸ್ತನ್ನು ಪಾಲಿಸಾಲು ಪ್ರಯತ್ನಿಸಬೇಕು

ಸಮಯ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು

ಸ್ವಚ್ಛತೆಗೆ ಆದ್ಯತೆ ನೀಡಬೇಕು

ಕಾನೂನನ್ನು ಪಾಲಿಸಬೇಕು

ಒಬ್ಬ ಉತ್ತಮ ವ್ಯಕ್ತಿಯಾಗಿ ಬೆಳೆಯಬೇಕು

ತನ್ನ ದೇಹದ ಆರೋಗ್ಯವನ್ನು ಸಧೃಡತೆಯನ್ನು ಕಾಪಾಡಿಕೊಳ್ಳಬೇಕು


ಪ್ರಮಾಣ

ಸಮೂಹ ಶಕ್ತಿ ಸಂಘಟನೆಯ ಶಿಸ್ತುಬದ್ಧ ಸದಸ್ಯನಾಗಬಯಸುವ .............

ಎಂಬ ಹೆಸರಿನವನಾದ ನಾನು

ಸಮೂಹ ಶಕ್ತಿ ಸಂಘಟನೆಯ ಆಶಯಗಳಿಗೆ, ನಿಯಮಗಳಿಗೆ, ಕ್ರಮಗಳಿಗೆ ಮತ್ತು ನೀತಿಗಳಿಗೆ ಬದ್ಧನಾಗಿರುತ್ತೇನೆ

ಸಮೂಹ ಶಕ್ತಿಗೆ ನಿಷ್ಠನಾಗಿರುತ್ತೇನೆ

ಜ್ಞಾನಾರ್ಜನೆಯಲ್ಲಿ ಆಸಕ್ತಿ ಹೊಂದಿರುತ್ತೇನೆ

ಪ್ರಚಲಿತ ವಿಚಾರಗಳನ್ನು ತಿಳಿದುಕೊಂಡಿರುತ್ತೇನೆ

ಸಾಕಷ್ಟು ಕಾನೂನನ್ನೂ ಅರಿತಿರುತ್ತೇನೆ

ರಾಷ್ಟ್ರ ರಾಜ್ಯ ಮತ್ತು ಇತರ ರಾಜಕೀಯ ವ್ಯವಸ್ಥೆಗಳನ್ನು ಅರಿತಿರುತ್ತೇನೆ

ವೈಚಾರಿಕವಾಗಿ ಚಿಂತಿಸುತ್ತೇನೆ

ವಾಸ್ತವವಾದಿಯಾಗಿರುತ್ತೇನೆ

ಮೂಢನಂಬಿಕೆಗಳನ್ನು ವಿರೋಧಿಸುತ್ತೇನೆ

ಕಂದಾಚಾರಗಳನ್ನು ಪ್ರತಿಭಟಿಸುತ್ತೇನೆ

ನ್ಯಾಯಕ್ಕಾಗಿ ಹೋರಾಡುತ್ತೇನೆ

ಧೈರ್ಯವಂತನಾಗಿರುತ್ತೇನೆ

ಏಕಾಂಗಿಯಾಗಿ ಹೋರಾಡಲೂ ಸಿದ್ಧನಾಗಿರುತ್ತೇನೆ

ಅನ್ಯಾಯವನ್ನು ಖಂಡಿಸುತ್ತೇನೆ

ಅಕ್ರಮಗಳನ್ನು ತಡೆಯುತ್ತೇನೆ

ಸಮಾಜ ಸೇವಕನಾಗಿರುತ್ತೇನೆ

ನನ್ನ ಸಂಗಡಿಗರನ್ನೂ ಉತ್ತಮರನ್ನಾಗಿಸುವ ಮನಸ್ಥಿತಿಯವನಾಗಿರುತ್ತೇನೆ

ಓದುವ ಹವ್ಯಾಸ ಹೊಂದಿರುತ್ತೇನೆ

ತಪ್ಪಿಲ್ಲದೇ ಬರೆಯುವವನಾಗಿರುತ್ತೇನೆ

ಪ್ರಶ್ನಿಸುವ ತಾಕತ್ತಿರುವವನಾಗಿರುತ್ತೇನೆ

ವಿವೇಚನಾಶಕ್ತಿಯನ್ನು ಬೆಳೆಸಿಕೊಳ್ಳುತ್ತೇನೆ

ವಯಕ್ತಿವಾಗಿಯೂ ಬೆಳೆಯುವ ಹಂಬಲವಿಟ್ಟುಕೊಳ್ಳುತ್ತೇನೆ

ಆರ್ಥಿಕವಾಗಿ ಸಧೃಢನಾಗುವ ಅಭಿಲಾಷೆ ಇಟ್ಟುಕೊಳ್ಳುತ್ತೇನೆ

ಸಹಾಯ ಮಾಡುವ ಗುಣವಿಟ್ಟುಕೊಳ್ಳುತ್ತೇನೆ

ಏನೇ ಕೆಲಸ ಮಾಡಲೂ ಸಿದ್ಧನಿರುತ್ತೇನೆ

ಚತುರ ಮಾತುಗಾರ ನಾಗಿರುತ್ತೇನೆ

ಸಂಘಟನಾ ಕೌಶಲ್ಯ ಬೆಳೆಸಿಕೊಳ್ಳುತ್ತೇನೆ

ನನ್ನ ತಪ್ಪನ್ನು ಒಪ್ಪಿಕೊಳ್ಳುವ ಉದಾರ ಹೃದಯಿಯಾಗಿರುತ್ತೇನೆ

ಪ್ರಾಮಾಣಿಕನಾಗಿರುತ್ತೇನೆ

ವಿರೋಧಿಯ ವಿಚಾರವನ್ನೂ ಗೌರವಿಸುವವನಾಗಿರುತ್ತೇನೆ

ನನ್ನ ಕುಟುಂಬದ ಏಳಿಗೆಗಾಗಿ ದುಡಿಯುವವನಾಗಿರುತ್ತೇನೆ

ಅವಿರತವಾಗಿ ಶ್ರಮಿಸುವವನಾಗಿರುತ್ತೇನೆ

ಒಬ್ಬ ಉತ್ತಮ ನಾಗರಿಕನಾಗಿರಬೇಕೆಂಬ ಹಂಬಲವಿಟ್ಟುಕೊಳ್ಳುತ್ತೇನೆ

ಸತ್ಯಕ್ಕೆ ಪ್ರಾಮುಖ್ಯತೆ ಕೊಡುವವನಾಗಿರುತ್ತೇನೆ

ಸಮಾಜದಲ್ಲಿ ದುರ್ಬಲರನ್ನು ಗೌರವಿಸುತ್ತೇನೆ ಮತ್ತು ಅವರ ಪರವಾಗಿ ನಿಲ್ಲುತ್ತೇನೆ

ದೇಶದ ಸಂವಿಧಾನವನ್ನು ತಿಳಿದಿರುತ್ತೇನೆ ಮತ್ತು ಅದನ್ನು ಗೌರವಿಸುತ್ತೇನೆ

ನೈತಿಕ ಮೌಲ್ಯಗಳನ್ನು ಮೈಗೂಡಿಸಿಕೊಂಡಿರುತ್ತೇನೆ

ನಿಯತ್ತು ಮತ್ತು ಬದ್ಧತೆ ಇಟ್ಟುಕೊಳ್ಳುತ್ತೇನೆ

ನಾಯಕನಾಗಿ ಬೆಳೆಯುತ್ತೇನೆ

ಸದಾ ಶಿಸ್ತನ್ನು ಪಾಲಿಸುತ್ತೇನೆ

ಸಮಯ ಪ್ರಜ್ಞೆಯನ್ನು ಬೆಳೆಸಿಕೊಳ್ಳುತ್ತೇನೆ

ಸ್ವಚ್ಛತೆಗೆ ಆದ್ಯತೆ ನೀಡುತ್ತೇನೆ

ಕಾನೂನನ್ನು ಪಾಲಿಸುತ್ತೇನೆ

ಒಬ್ಬ ಉತ್ತಮ ವ್ಯಕ್ತಿಯಾಗುತ್ತೇನೆ

ನನ್ನ ದೇಹದ ಆರೋಗ್ಯವನ್ನು ಸಧೃಡತೆಯನ್ನು ಕಾಪಾಡಿಕೊಳ್ಳುತ್ತೇನೆ

ನನ್ನಲ್ಲಿ ಮತ್ತು ನನ್ನ ಸುತ್ತಮುತ್ತಲೂ ಉತ್ತಮ ಬದಲಾವಣೆಯನ್ನು ತರುತ್ತೇನೆ

ಎಂದು ಪ್ರಮಾಣ ಮಾಡುತ್ತೇನೆ