ನಮ್ಮ ಬಗ್ಗೆ

ಸಮೂಹ ಶಕ್ತಿ ಒಂದು ಸಾಮಾಜಿಕ ಮತ್ತು ರಾಜಕೀಯ ಸಂಘಟನೆ. ಸಾಮಾಜಿಕ ಎಂದು ಹೇಳಿದಾಗ ಒಂದು ಅರ್ಥ ಬರುತ್ತದೆ, ಹಾಗೇ ರಾಜಕೀಯ ಎಂದಾಗ ಇನ್ನೊಂದು ಅರ್ಥ ಬರುತ್ತದೆ. ಹಾಗಾದರೆ ಈ ಪದಗಳ ನಿಜವಾದ ಅರ್ಥ ಏನು?

ಒಂದು ಸಂಘಟನೆ ಸಾಮಾಜಿಕ ಎಂದಾಗ ಅದು ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತದೆ ಎಂದು ಅಂದುಕೊಳ್ಳಬಹುದು. ಸಾಮಾಜಿಕ ಕ್ಷೇತ್ರದಲ್ಲಿ ಎಂದರೆ ಸಮಾಜಕ್ಕೆ ಸಂಬಂಧಪಟ್ಟ ವಿಷಯಗಳಬಗ್ಗೆ, ಸಮಾಜದ ಏಳಿಗೆಗಾಗಿ, ಮತ್ತು ಸಮಾಜವನ್ನು ಬಲಿಷ್ಠಗೊಳಿಸುವುದಕ್ಕಾಗಿ ಕೆಲಸ ಮಾಡುತ್ತದೆ ಎಂದು ಅಂದುಕೊಳ್ಳಬಹುದು. ಹಾಗಾದರೆ ಈ ಎಲ್ಲಾ ಉದಾತ್ತ ಆಶಯಗಳನ್ನಿಟ್ಟುಕೊಂಡು ಸಮಾಜಕ್ಕಾಗಿ ಕೆಲಸ ಮಾಡಿದರೆ ಸಾಕೇ? ಸಾಮಾಜಿಕ ಕಾರ್ಯಕರ್ತರ ಕಾರ್ಯವ್ಯಾಪ್ತಿ ಎಷ್ಟು, ಮತ್ತು ಅವರು ಎಷ್ಟನ್ನು ಸಾಧಿಸಲು ಸಾಧ್ಯ ಎಂಬ ಪ್ರಶ್ನೆಗಳು ಹುಟ್ಟುತ್ತವೆ. ಸಾಮಾನ್ಯವಾಗಿ ಸಾರ್ವಜನಿಕ ಕ್ಷೇತ್ರದಲ್ಲಿ ಸಮಾಜಕ್ಕಾಗಿ ಕೆಲಸ ಮಾಡುವವರು ಬಹಳ ಇತಿಮಿತಿಗಳಲ್ಲಿ ಕೆಲಸ ಮಾಡುತ್ತಿರುತ್ತಾರೆ. ಏಕೆಂದರೆ ಅವರ ಉದ್ದೇಶ ಒಳ್ಳೆಯ ಕೆಲಸ ಮಾಡಬೇಕು ಎಂಬುದಾಗಿರುತ್ತದೇ ವಿನಃ ಜರನನ್ನು ಸಂಘಟಿಸಿ ಅವರನ್ನು ಶಕ್ತಿಯನ್ನಾಗಿ ಪರಿವರ್ತಿಸುವುದು ಆಗಿರುವುದಿಲ್ಲ. ಏಕೆಂದರೆ ಹಾಗೆ ಮಾಡುವುದು ರಾಜಕೀಯ. ಹಾಗಾದರೆ ರಾಜಕೀಯ ಎಂದರೆ ಏನು?

ರಾಜಕೀಯ ಎಂದಾಕ್ಷಣ ಅದು ರಾಜಕೀಯ ಪಕ್ಷಗಳಿಗೆ ಸಂಬಂಧ ಪಟ್ಟಿದ್ದು ಎಂಬ ಭಾವನೆ ಅನೇಕರ ಮನಸ್ಸಿನಲ್ಲಿದೆ. ಅದು ಸರಿಯೇ ? ರಾಜಕೀಯ ಎಂದರೆ ಪಕ್ಷ ಮತ್ತು ರಾಜಕಾರಣಕ್ಕೆ ಸಂಬಂಧ ಪಟ್ಟಿದ್ದೇ ? ಅಲ್ಲ. ರಾಜಕೀಯ ಎಂದರೆ ಅಭಿಪ್ರಾಯವನ್ನು ಒಗ್ಗೂಡಿಸಿ ಆ ಅಭಿಪ್ರಾಯವನ್ನು ಶಕ್ತಿಯಾಗಿಸುವುದು. ಆ ಶಕ್ತಿಯ ಮೂಲಕ ಸಮಾಜದ ಒಳಿತಿಗಾಗಿ ಕೆಲಸ ಮಾಡುವುದು. ಸರಳವಾಗಿ ಹೇಳಬೇಕೆಂದರೆ ಸಮಾಜಿಕ ಸಂಘಟನೆ ಒಳ್ಳೆ ಉದ್ದೇಶಗಳಿಗಾಗಿ ಕೆಲಸ ಮಾಡಿದರೆ, ಆ ಕೆಲಸವನ್ನು ಜನ ಶಕ್ತಿಯ ಮೂಲಕ ಮಾಡಿ ತೀರುವುದೇ ರಾಜಕೀಯ. ಹಾಗಾದರೆ ರಾಜಕೀಯ ಹೇಗೆ ತಪ್ಪು? ಹೌದು ಕ್ಷುಲ್ಲಕ ರಾಜಕಾರಣ ಮಾಡುವುದು ತಪ್ಪು, ಆದರೆ ಸಮಾಜದಲ್ಲಿ ರಾಜಕೀಯ ಶಕ್ತಿಯನ್ನು ಕ್ರೂಡೀಕರಿಸುವುದು ತಪ್ಪಾ? ಅಲ್ಲವೇ ಅಲ್ಲ. ಈಗಿನ ಪ್ರಪಂಚದಲ್ಲಿ ರಾಜಕೀಯ ಶಕ್ತಿ ಇಲ್ಲದೆ ಏನೂ ಮಹತ್ತರವಾದುದನ್ನು ಸಾಧಿಸುವುದು ಸಾಧಯವಿಲ್ಲ. ಪಕ್ಷ ರಾಜಕೀಯವೇ ಬೇರೆ ಸಾಮಾಜಿಕ ರಾಜಕೀಯವೇ ಬೇರೆ. ಸಾಮಾಜಿಕ ರಾಜಕೀಯ ಒಂದು ಹಂತದಲ್ಲಿ ಸ್ವಾಭಾವಿಕವಾಗಿ ಪಕ್ಷ ರಾಜಕೀಯವಾಗಿ ಪರಿಣಮಿಸಿದರೆ ಅದು ಬೇರೆಯೇ ವಿಷಯ. ಆದರೆ ಆ ಭಯದಿಂದ ರಾಜಕೀಯವೇ ತಪ್ಪು ಎಂದು ಜನ ಶಕ್ತಿಯ ಸಂಘಟನೆ ಮಾಡದ ಿರುವುದು ಮತ್ತು ವ್ಯವಸ್ಥೆಯ ಮೇಲೆ ಒತ್ತಡ ತಂದು ಬದಲಾವಣೆ ಮಾಡದಿರುವುದು ಅಕ್ಷಮ್ಯ ಮುಗ್ದತೆಯಾಗುತ್ತದೆ.

ಘನತೆಯಿಂದ ಬದುಕುವುದು, ನಮ್ಮ ಹಕ್ಕುಗಳ ಬಗ್ಗೆ ತಿಳಿಯುವುದು